18+ ಮಾತ್ರ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ.
Google Flow Music ಎಂಬುದು Google Labs ನ AI ಮ್ಯೂಸಿಕ್ ಸ್ಟುಡಿಯೋ ಆಗಿದ್ದು, ಇದು AI ಮೂಲಕ ಹಾಡುಗಳನ್ನು ರಚಿಸುವುದನ್ನು ಸುಲಭಗೊಳಿಸುತ್ತದೆ. ಮೂಡ್ ಅನ್ನು ವಿವರಿಸಿ ಅಥವಾ ನಿಮ್ಮ ಸಾಹಿತ್ಯವನ್ನು ಪೇಸ್ಟ್ ಮಾಡಿ ಮತ್ತು ಪೂರ್ಣ, ಉನ್ನತ ಗುಣಮಟ್ಟದ ಹಾಡನ್ನು ಪಡೆಯಿರಿ. ನಿಮ್ಮ ಮನಸ್ಸಿನಲ್ಲಿ ಮೂಡಿಬಂದ ರಾಗವು ಅಂದುಕೊಂಡಂತೆಯೇ ಕೇಳಿಸುವವರೆಗೆ ನಿಮ್ಮದೇ ಆದ AI ಮ್ಯೂಸಿಕ್ ಪ್ರೊಡ್ಯೂಸರ್ ಮೂಲಕ ಅದನ್ನು ರೂಪಿಸುತ್ತಾ ಸಾಗಿ.
ಯಾವುದೇ ರೆಕಾರ್ಡಿಂಗ್ ಸ್ಟುಡಿಯೋ, ದುಬಾರಿ ಉಪಕರಣಗಳು ಅಥವಾ ಸಂಗೀತದ ಜ್ಞಾನದ ಅಗತ್ಯವೇ ಇಲ್ಲ. ನೀವು ನಿಮ್ಮ ಮೊದಲ ರಾಗವನ್ನು ಬರೆಯುತ್ತಿರಲಿ ಅಥವಾ ವರ್ಷಗಳಿಂದ ಬೀಟ್ಗಳನ್ನು ರಚಿಸುತ್ತಿರಲಿ, Flow Music ನಿಮ್ಮ ಸೃಜನಶೀಲತೆಯ ಹರಿವಿಗೆ ಬೆಂಬಲ ನೀಡುತ್ತದೆ.
ಮೂಡ್ ಅಥವಾ ಸಾಹಿತ್ಯವನ್ನು ಪೂರ್ಣ ಹಾಡಾಗಿ ಪರಿವರ್ತಿಸಿ
"ನನ್ನ ಬೆಳಗಿನ 7 ಗಂಟೆಯ ಕಾಫಿಗಾಗಿ ಸನ್ಲಿಟ್ ಹೌಸ್ ಮ್ಯೂಸಿಕ್" ನಂತಹ ಪ್ರಾಂಪ್ಟ್ ಅನ್ನು ಟೈಪ್ ಮಾಡಿ ಅಥವಾ ನೀವು ಬರೆದ ಸಾಹಿತ್ಯವನ್ನು ಪೇಸ್ಟ್ ಮಾಡಿ; Flow Music ಗಾಯನ ಮತ್ತು ವಾದ್ಯಸಂಗೀತದೊಂದಿಗೆ ಸಂಪೂರ್ಣ ಹಾಡನ್ನು ನಿಮಗಾಗಿ ಸಿದ್ಧಪಡಿಸುತ್ತದೆ. ಯಾವುದೇ ಶೈಲಿಯ ಸಂಗೀತವನ್ನು ಪ್ರಯತ್ನಿಸಿ: ಪಾಪ್, ಹಿಪ್-ಹಾಪ್, ಲೋ-ಫೈ, ಹೌಸ್, ಇಂಡಿ ರಾಕ್, R&B, ಕಂಟ್ರಿ ಮತ್ತು ಇನ್ನಷ್ಟು.
ನಿಮ್ಮ AI ಪ್ರೊಡ್ಯೂಸರ್ ಜೊತೆಗೆ ಚಾಟ್ ಮಾಡಿ
ನಿಮಗೆ ಬೇಕಾದುದನ್ನು ಹೇಳುವ ಮೂಲಕ ನಿಮ್ಮ ಹಾಡನ್ನು ಮತ್ತಷ್ಟು ಉತ್ತಮಗೊಳಿಸಿ. Gemini ಮೂಲಕ ಕಾರ್ಯನಿರ್ವಹಿಸುವ ನಿಮ್ಮ ಪ್ರೊಡ್ಯೂಸರ್ ಬಳಿ, "ಬೇಸ್ ಅನ್ನು ಇನ್ನೂ ಪವರ್ಫುಲ್ ಮಾಡು", "ಬ್ರಿಡ್ಜ್ನಲ್ಲಿ ಗಿಟಾರ್ ಸೋಲೋ ಸೇರಿಸು" ಅಥವಾ "ಇದನ್ನು ಗಂಭೀರವಾದ ಧ್ವನಿಯಲ್ಲಿ ಹಾಡು" ಎಂದು ಕೇಳಿ ನೋಡಿ. ಇದು ಬದಲಾವಣೆಗಳನ್ನು ಅನ್ವಯಿಸುತ್ತದೆ ಹಾಗೂ ಪ್ರತಿ ಟೇಕ್ನೊಂದಿಗೆ ನಿಮ್ಮ ಹಾಡನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ಕವರ್ ಮಾಡಿ, ಭಾಗವನ್ನು ಬದಲಿಸಿ ಮತ್ತು ವಿಸ್ತರಿಸಿ
ನಿಮ್ಮ ಸ್ವಂತ ಟ್ರ್ಯಾಕ್ಗಳನ್ನು ಅಪ್ಲೋಡ್ ಮಾಡಿ ಅಥವಾ ನೀವು ರಚಿಸಿದ ಹಾಡುಗಳನ್ನು ರೀಮಿಕ್ಸ್ ಮಾಡಿ. ಹೊಸ ಶೈಲಿಯಲ್ಲಿ ಕವರ್ ಸಾಂಗ್ ರಚಿಸಿ, ಒಂದು ವಿಭಾಗವನ್ನು ಬದಲಾಯಿಸಿ (ಗಿಟಾರ್ ಬದಲಿಗೆ ವಾರ್ಮ್ ರೋಡ್ಸ್ ಕೀಗಳನ್ನು ಬಳಸಿ), ಅಥವಾ ಹೊಸ ಚರಣ ಅಥವಾ ಔಟ್ರೋದೊಂದಿಗೆ ಹಾಡನ್ನು ವಿಸ್ತರಿಸಿ.
ನಿಮ್ಮ ಹಾಡಿಗಾಗಿ ಮ್ಯೂಸಿಕ್ ವೀಡಿಯೊ ರಚಿಸಿ
Google ನ ವೀಡಿಯೊ ಮಾಡೆಲ್ ಆದ Veo ಮೂಲಕ ರಚಿಸಲಾದ AI ಮ್ಯೂಸಿಕ್ ವೀಡಿಯೊದೊಂದಿಗೆ ನಿಮ್ಮ ಟ್ರ್ಯಾಕ್ಗೆ ಜೀವ ತುಂಬಿ. ಲುಕ್, ಪಾತ್ರಗಳು ಮತ್ತು ಮೂಡ್ ಅನ್ನು ನಿರ್ದೇಶಿಸಿ, ನಂತರ ನಿಮ್ಮ ಹಾಡಿಗೆ ಸಿಂಕ್ ಮಾಡಲಾದ ವೀಡಿಯೊವನ್ನು ಹಂಚಿಕೊಳ್ಳಿ.
SPACES ನೊಂದಿಗೆ ನಿರ್ಮಿಸಿ
Spaces ನೊಂದಿಗೆ ಇನ್ನಷ್ಟು ಮುಂದೆ ಹೋಗಿ: ಕಸ್ಟಮ್ ಆಡಿಯೋ ಪ್ಲಗ್ಇನ್ಗಳು, ಮ್ಯೂಸಿಕ್ ಗೇಮ್ಗಳು ಅಥವಾ ನಿಮ್ಮ ಸ್ವಂತ ಮಿನಿ ಮ್ಯೂಸಿಕ್ ಆ್ಯಪ್ಗಳನ್ನು ರಚಿಸಿ. ಅವುಗಳನ್ನು ಹಂಚಿಕೊಳ್ಳಿ, ಇದರಿಂದ ಇತರರೂ ಸಹ ಅವುಗಳನ್ನು ಬಳಸಬಹುದು ಹಾಗೂ ರೀಮಿಕ್ಸ್ ಮಾಡಬಹುದು.
ಸಂಗೀತವನ್ನು ಹಂಚಿಕೊಳ್ಳಿ ಮತ್ತು ಕಂಡುಕೊಳ್ಳಿ
ನಿಮ್ಮ ಹಾಡುಗಳನ್ನು ಪ್ರಕಟಿಸಿ, ಪ್ಲೇಪಟ್ಟಿಗಳನ್ನು ರಚಿಸಿ, ಕ್ರಿಯೇಟರ್ಗಳನ್ನು ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಸಂಗೀತವನ್ನು ಅನ್ವೇಷಿಸಿ. ನೀವು ಹಾಡುಗಳನ್ನು ರಚಿಸುತ್ತಾ ಸಾಗಿದಂತೆ Flow Music ನಿಮ್ಮ ಅಭಿರುಚಿಯನ್ನು ಗ್ರಹಿಸುತ್ತದೆ, ಆದ್ದರಿಂದ ಕಾಲಾನಂತರದಲ್ಲಿ ಇದು ನಿಮ್ಮ ವೈಯಕ್ತಿಕ ಶೈಲಿಗೆ ಇನ್ನಷ್ಟು ಹತ್ತಿರವಾಗುತ್ತದೆ.
ಹೊಸ ಕಲಾವಿದ ಅಥವಾ ಪ್ರೊಡ್ಯೂಸರ್ ಆಗಿ ನಿಮ್ಮದೇ ಆದ ವಿಶಿಷ್ಟ ಧ್ವನಿಯನ್ನು ಕಂಡುಕೊಳ್ಳಿ. ಸ್ನೇಹಿತರಿಗಾಗಿ ಹುಟ್ಟುಹಬ್ಬದ ಹಾಡು, ನಿಮ್ಮ ಪಾಡ್ಕಾಸ್ಟ್ಗಾಗಿ ಥೀಮ್ ಹಾಡು, ನಿಮ್ಮ ಮುಂದಿನ ವೀಡಿಯೊಗಾಗಿ ಬೀಟ್ ಅಥವಾ ನಿಮಗಾಗಿಯೇ ಒಂದು ಟ್ರ್ಯಾಕ್ ರಚಿಸಲು Flow Music ಅನ್ನು ನಿಮ್ಮ AI ಹಾಡು ಜನರೇಟರ್ ಆಗಿ ಬಳಸಿ. ಇಂದು ನೀವು ಏನನ್ನು ರಚಿಸುತ್ತೀರಿ?
ಬಳಕೆಯ ನಿಯಮಗಳು: https://policies.google.com/terms
ಗೌಪ್ಯತೆ ನೀತಿ: https://policies.google.com/privacy
ಗೌಪ್ಯತೆ ಸೂಚನೆ: https://www.flowmusic.app/privacynotice
ನಿಮ್ಮ AI ಸಂಗೀತ ಸ್ಟುಡಿಯೋ: ಐಡಿಯಾ, ಸಾಹಿತ್ಯವನ್ನು ಹಾಡು, ರೀಮಿಕ್ಸ್, ವೀಡಿಯೊಗೆ ಬದಲಿಸಿ.
ಅಪ್ಡೇಟ್ ದಿನಾಂಕ
ನವೆಂ 25, 2026